ತುಮಕೂರಿನ ಜಯನಗರದ ನಿವಾಸಿ ಅರ್ಜುನ್ ಮತ್ತು ರಂಜನಾ ದಂಪತಿ ಗಿಳಿಯನ್ನ ಕಳೆದುಕೊಂಡು ದುಃಖ ಪಡ್ತಿದ್ದಾರೆ. ದಿನನಿತ್ಯ ಇದರ ಜೊತೆ ಕುಟುಂಬಸ್ಥರು ಪ್ರೀತಿಯಿಂದ ಕಾಲ ಕಳೆಯುತ್ತಿದ್ರು. ಆದ್ರೆ ಈ ಮುದ್ದಾದ ಎರಡು ಗಿಳಿಗಳ ಪೈಕಿ ಒಂದು ಮನೆ ಬಿಟ್ಟು ಹಾರಿ ಹೋಗಿದೆ. ದುಃಖದಲ್ಲಿ ಗಿಳಿ ಹುಡುಕಾಟ ನಡೆಸ್ತಿದ್ದಾರೆ.ಸಾಕಿದ ಗಿಳಿಗಾಗಿ ಆಟೋದಲ್ಲಿ ಅನೌನ್ಸ್ ಮಾಡುತ್ತಾ, ಕರಪತ್ರ ಹಂಚುತ್ತಿದ್ದಾರೆ. ಗಿಣಿ ಪತ್ತೆ ಮಾಡಿಕೊಟ್ಟವರಿಗೆ 50 ಸಾವಿರ ರೂಪಾಯಿ ಬಹುಮಾನ ಘೋಷಣೆ ಮಾಡಿದ್ದಾರೆ. ಅರ್ಜುನ್ ದಂಪತಿ 20 ದಿನಗಳ ಹಿಂದಷ್ಟೇ ಭದ್ರಾವತಿಯಿಂದ ತುಮಕೂರಿಗೆ ಶಿಫ್ಟ್ ಆಗಿತ್ತು. ಮೂರು ದಿನಗಳ ಹಿಂದೆ ಪಂಜರದಿಂದ ಗಂಡು ಗಿಣಿ ರುಸ್ತುಮಾ ಹಾರಿಹೋಗಿದ್ದು, ವಾಪಸ್ ಆಗಿಲ್ಲ.
#publictv #bigbulletin #hrranganath